Shivam Associates ಬೆಳಗಾವಿ : ಅಚ್ಚರಿ ಪಡುವ ರೀತಿಯಲ್ಲಿ ಬೆಳಗಾವಿ ನಗರದಲ್ಲಿ ಮಲ್ಟಿ ಲೆವಲ್ ನೆಟ್ ವರ್ಕ್ ಮಾರ್ಕೆಂಟಿಂಗ್ (Net work Marketing) ಮೂಲಕ ಅಂದಾಜು 4500 ಕೋಟಿ ರೂಪಾಯಿಗು ಮಿಕ್ಕಿ ಅಕ್ರಮ ಠೇವಣಿ ( Fraud) ಸಂಗ್ರಹಿಸಿದ Shivam Associates ನ ಶಿವಾನಂದ ಎಸ್. ನೀಲನಣ್ಣವರ ಅನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ರಾಜ್ಯದ ಗಮನ ಸೆಳೆದಿರುವ ಬಹುಕೋಟಿ ರೂಪಾಯಿ ಠೇವಣಿ ಸಂಗ್ರಹ ಪ್ರಕರಣದಲ್ಲಿ ಶಿವಾನಂದ ಎಸ್. ನೀಲನಣ್ಣವರ ಹಾಗೂ ಅವರ ಸಂಸ್ಥೆ Shivam Associates ವಿರುದ್ಧ ತನಿಖೆ ತೀವ್ರಗೊಂಡಿದೆ. ಹೆಚ್ಚಿನ ಲಾಭದ ಭರವಸೆ ನೀಡಿ ಸಾರ್ವಜನಿಕರಿಂದ ಸಾವಿರಾರು ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು Fraud ಪ್ರಕರಣ ದಾಖಲಿಸಿದ್ದು, ತನಿಖೆಯನ್ನು ಸಿಐಡಿಗೆ ವರ್ಗಾಯಿಸುವ ಪ್ರಕ್ರಿಯೆ ಆರಂಭವಾಗಿದೆ.
Shivam Associates ವಾರ್ಷಿಕ ಸುಮಾರು 36 ಶೇಕಡಾ ಆದಾಯ
ಪೊಲೀಸರ ಪ್ರಕಾರ, “ಶಿವಂ ಅಸೋಸಿಯೇಟ್ಸ್” ಸಂಸ್ಥೆ ಹೂಡಿಕೆದಾರರಿಗೆ ತಿಂಗಳಿಗೆ 3 ಶೇಕಡಾ ಹಾಗೂ ವಾರ್ಷಿಕ ಸುಮಾರು 36 ಶೇಕಡಾ ಆದಾಯ ನೀಡುವ ಭರವಸೆ ನೀಡಿತ್ತು. ಆರಂಭಿಕ ಹಂತದಲ್ಲಿ ಕೆಲವರಿಗೆ ನಿಯಮಿತವಾಗಿ ಹಣ ವಾಪಾಸು ನೀಡಲಾಗಿದ್ದರಿಂದ ಹೆಚ್ಚಿನ ಜನರು ಹೂಡಿಕೆ ಮಾಡಲು ಮುಂದಾದರು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಬೆಳಗಾವಿ ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋರಸೆ ನೀಡಿದ ಮಾಹಿತಿಯಂತೆ, ಮಲಮಾರುತಿ ಪೊಲೀಸ್ ಠಾಣೆಯಲ್ಲಿ BUDS (Banning of Unregulated Deposit Schemes Act, 2019) ಕಾಯ್ದೆ, KPID (Karnataka Protection of Interest of Depositors in Financial Establishments Act) ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಮಗಳಡಿ FIR ದಾಖಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಸಾವಿರಾರು ಜನರು ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣ ಅಧಿಕಾರಿಗಳ ಗಮನಕ್ಕೆ ಬಂದದ್ದು ಸುಮಾರು ಒಂದೂವರೆ ತಿಂಗಳ ಹಿಂದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಮಾರುಕಟ್ಟೆ ಗುಪ್ತಚರ ಮೂಲಗಳಿಂದ “ಶಿವಂ ಅಸೋಸಿಯೇಟ್ಸ್” ಸಂಸ್ಥೆಯ ಹಣಕಾಸು ವ್ಯವಹಾರಗಳ ಬಗ್ಗೆ ಅನುಮಾನ ವ್ಯಕ್ತವಾದ ಬಳಿಕ, ಸಹಕಾರ ಇಲಾಖೆ ಮತ್ತು ಆದಾಯ ಇಲಾಖೆ ಪ್ರತ್ಯೇಕವಾಗಿ ತನಿಖೆ ಆರಂಭಿಸಿದ್ದವು.
Shivam Associates ವೈರಲ್ ಭಾಷಣ ಬಿಚ್ಚಿದ ಅಕ್ರಮ ಕತೆ
ಶಿವಂ ಅಸೋಸಿಯೇಟ್ಸ್” ಸಂಸ್ಥೆಯ ಶಿವಾನಂದ ಎಸ್. ನೀಲನಣ್ಣವರ ಖಾಸಗಿ ಟೀವಿ ಚಾನಲಿನಲ್ಲಿ ಮಾಡಿದ ಭಾಷ ಣದ ತುಣುಕು ಸೋಶಿಯಲ್ ಮ ಡಿಯಾದಲ್ಲಿ ವೈರಲ್ ಆಗಿರುವುದು ಇಡೀ ವಂಚವ ಕತೆಯನ್ನು ಬಯಲು ಮಾಡಿತ್ತು. ಇದು ಸಹಜವಾಗಿ ಬೆಳಗಾವಿ ಜಿಲ್ಲಾಡಳಿತದ ಗಮನ ಸೆಳೆದಿತ್ತು.
ವೈರಲ್ ವಿಡಿಯೋದಲ್ಲಿ ತಾನು ಸಾಮ್ರಜ್ಯ ಕಟ್ಟಿದ್ದೇನೆ. ಯುದ್ದಕ್ಕೆ ಸಿದ್ಧನಾಗಿದ್ದೇನೆ.. ಮುಂತಾದ ಮಾತುಗಳಿವೆ. ಸಹಜವಾಗಿ ಇದು ವೈರಲ್ ಆಗಿತ್ತು. ಜಿಲ್ಲಾಡಳಿತದ ಗಮನ ಸೆಳೆದಿತ್ತು.
ಈ ಮಧ್ಯೆ. ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೂ ಏನೋ ನಡೆಯಬಾರದು ನಡೆಯುತ್ತಿದೆ ಎಂಬ ಗುಮಾನಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಮೊದಲಾಗಿ ಸಹಕಾರಿ ಇಲಾಖೆಯ ಅಧಿಕಾರಿಗಳಿಗೆ ಪ್ರಾಥಮಿಕ ಮಾಹಿತಿ ಕೇಳಿದ್ದರು. ಶಿವಾನಂದ ಎಸ್. ನೀಲನಣ್ಣವರ ಇಷ್ಟೊಂದು ಕೋಟಿ ರೂಪಾಯಿ ಸಂಗ್ರಹಿಸಿದಾಗ ಕನಿಷ್ಟ ಸಹಕಾರಿ ಇಲಾಖೆಯಲ್ಲಿ ಕೂಡ ಯಾವುದೇ ನೋಂದಾವಣೆ ಮಾಡಿರಲಿಲ್ಲ. ಹಣಕಾಸು ವ್ಯವಹಾರಗಳ ಬಗ್ಗೆ ಅನುಮಾನ ವ್ಯಕ್ತವಾದ ಬಳಿಕ, ಸಹಕಾರ ಇಲಾಖೆ, ಕಂದಾಯ ಇಲಾಖೆ ಮತ್ತು ಆದಾಯ ಇಲಾಖೆ ಪ್ರತ್ಯೇಕವಾಗಿ ನಿಗಾ ಇರಿಸಿದ್ದರು.
ಕೆಲವು ಹೂಡಿಕೆದಾರರಿಗೆ ಬಡ್ಡಿ ಸಂದಾಯ ಆಗದಿರುವ ದೂರುಗಳು ಅಧಿಕಾರಿಗಳ ಗಮನಕ್ಕೆ ಬರತೊಡಗಿತು.
ಅನಂತರ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಉಪವಿಭಾಗದ ದಂಡಾಧಿಕಾರಿಗೆ Shivam Associates ಕಚೇರಿಗೆ ದಾಳಿ ನಡೆಸಿ ಕಚೇರ ತಪಾಸಣೆ ಮಾಡಲು ಸೂಚಿಸಿದರು.

ಜಿಲ್ಲಾಧಿಕಾರಿ Mohammad Roshan ಅವರ ನಿರ್ದೇಶನದ ಮೇರೆಗೆ, ಉಪವಿಭಾಗದ ದಂಡಾಧಿಕಾರಿಗೆ ಮತ್ತು ಸಹಾಯಕ ಆಯುಕ್ತ ಆಗಿರುವ Shravan Nayak ನೇತೃತ್ವದ ತಂಡವು ಶಿವಬಸವ ನಗರದಲ್ಲಿರುವ ಶಿವಂ ಅಸೋಸಿಯೇಟ್ಸ್ ಕಚೇರಿಗಳ ಮೇಲೆ ದಾಳಿ ನಡೆಸಿತು. ದಾಳಿಯಲ್ಲಿ ಹಣಕಾಸು ವ್ಯವಹಾರಗಳ ದಾಖಲೆಗಳು, ಹೂಡಿಕೆದಾರರ ವಿವರಗಳು, ಬ್ಯಾಂಕ್ ದಾಖಲೆಗಳು ಹಾಗೂ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಯಿತು.
ದಾಖಲೆಗಳು, ಬ್ಯಾಂಕ್ ಖಾತೆಗಳು, ಡಿಜಿಟಲ್ ವ್ಯವಹಾರಗಳು ಮತ್ತು ಹೂಡಿಕೆದಾರರ ವಿವರಗಳನ್ನು ಪರಿಶೀಲಿಸಿದ ಬಳಿಕ ಅನುಮಾನಾಸ್ಪದ ಹಣ ವರ್ಗಾವಣೆ ಹಾಗೂ ನಿಯಂತ್ರಣರಹಿತ ಠೇವಣಿ ಸಂಗ್ರಹದ ಲಕ್ಷಣಗಳು Fraud ಕಂಡುಬಂದಿವೆ ಎಂದು ಅಧಿಕಾರಿಗಳು ಜಿಲ್ಲಾಧಿಕಾರಿಗೆ ತಿಳಿಸಿದ್ದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳುವಂತೆ, ತನಿಖಾ ವರದಿಯ ಆಧಾರದ ಮೇಲೆ ಸರ್ಕಾರಕ್ಕೆ ಮಾಹಿತಿ ರವಾನಿಸಲಾಗಿದ್ದು, ಪ್ರಕರಣವನ್ನು ಸಿಐಡಿಗೆ ಒಪ್ಪಿಸಲು ಶಿಫಾರಸು ಮಾಡಲಾಗಿದೆ. “ಜನರು ಹೂಡಿಕೆ ಮಾಡುವ ಮೊದಲು RBI, SEBI ಅನುಮತಿ ಹಾಗೂ ಕಾನೂನುಬದ್ಧ ದಾಖಲೆಗಳನ್ನು ಪರಿಶೀಲಿಸಬೇಕು” ಎಂದು ಅವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ತನಿಖೆಯ ಭಾಗವಾಗಿ ಬೆಳಗಾವಿಯ ಶಿವಬಸವ ನಗರದಲ್ಲಿರುವ ಕಚೇರಿಗಳು, ವಾಸಸ್ಥಳಗಳು ಹಾಗೂ ಸಂಬಂಧಿತ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಹಲವು ಹಣಕಾಸು ದಾಖಲೆಗಳು, ಹೂಡಿಕೆ ದಾಖಲೆಗಳು ಮತ್ತು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಅಧಿಕಾರಿಗಳು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವುದಾಗಿ ತಿಳಿದುಬಂದಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ 35 ಸಾವಿರದಿಂದ 45 ಸಾವಿರದವರೆಗೆ ಹೂಡಿಕೆದಾರರು ಈ ಯೋಜನೆಯಲ್ಲಿ ಭಾಗಿಯಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿವೃತ್ತ ಸೈನಿಕರು, ರೈತರು ಹಾಗೂ ಮಧ್ಯಮ ವರ್ಗದ ಜನರು ಕೂಡ ದೊಡ್ಡ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ತನಿಖಾಧಿಕಾರಿಗಳ ಪ್ರಕಾರ, “Acumen” ಎಂಬ ಅಪ್ಲಿಕೇಶನ್ ಮೂಲಕವೂ ಹೂಡಿಕೆಗಳನ್ನು ಸಂಗ್ರಹಿಸಲಾಗುತ್ತಿತ್ತು ಎಂಬ ಶಂಕೆ ಇದೆ. ಸಂಸ್ಥೆಯು ವಿವಿಧ ಜಿಲ್ಲೆಗಳು ಮತ್ತು ರಾಜ್ಯಗಳ ಮಟ್ಟದಲ್ಲಿ ಹಣಕಾಸು ವ್ಯವಹಾರ ನಡೆಸಿರುವ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಈ ನಡುವೆ, ಪ್ರಕರಣದ ಸಂಪೂರ್ಣ ಹಣದ ಹಾದಿ ಪತ್ತೆಹಚ್ಚಲು ಸಿಐಡಿ, ಬ್ಯಾಂಕ್ ವ್ಯವಹಾರಗಳು, ಆನ್ಲೈನ್ ವರ್ಗಾವಣೆಗಳು ಮತ್ತು ಮಧ್ಯವರ್ತಿಗಳ ಜಾಲವನ್ನು ಪರಿಶೀಲಿಸುತ್ತಿದೆ. ಹೂಡಿಕೆದಾರರಿಗೆ ತಮ್ಮ ಹೂಡಿಕೆಯ ದಾಖಲೆಗಳನ್ನು ಸಲ್ಲಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
Read This 2026 Monsoon : Early Arrival, Uneven Rains: What India Can Expect From the 2026 Monsoon
ಬಹುಕೋಟಿ ರೂಪಾಯಿ ಅಕ್ರಮ ಠೇವಣಿ ಸಂಗ್ರಹ ಪ್ರಕರಣದಲ್ಲಿ ಶಿವಾನಂದ ಎಸ್. ನೀಲನವರ ಹಾಗೂ ಅವರ ಸಂಸ್ಥೆ Shivam Associates ವಿರುದ್ಧದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಹೆಚ್ಚಿನ ಲಾಭದ ಭರವಸೆ ನೀಡಿ ಸಾರ್ವಜನಿಕರಿಂದ ಸಾವಿರಾರು ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ ಎಂಬ ಆರೋಪದ ಹಿನ್ನೆಲೆ ಜಿಲ್ಲಾಡಳಿತ, ಸಹಕಾರ ಇಲಾಖೆ ಹಾಗೂ ಪೊಲೀಸರು ಸಂಯುಕ್ತವಾಗಿ ದಾಳಿ ಮತ್ತು ತನಿಖೆ ನಡೆಸಿದ್ದಾರೆ. ಜಿಲ್ಲಾಧಿಕಾರಿ Mohammad Roshan ಅವರ ನಿರ್ದೇಶನದ ಮೇರೆಗೆ, ಸಹಾಯಕ ಆಯುಕ್ತ Shravan Nayak ನೇತೃತ್ವದ ತಂಡವು ಶಿವಬಸವ ನಗರದಲ್ಲಿರುವ ಶಿವಂ ಅಸೋಸಿಯೇಟ್ಸ್ ಕಚೇರಿಗಳ ಮೇಲೆ ದಾಳಿ ನಡೆಸಿತು. ಅನಂತರ ಪೊಲೀಸರ ತಂಡ ದಾಳಿ ನಡೆಸಿದೆ. ದಾಳಿಯಲ್ಲಿ ಹಣಕಾಸು ವ್ಯವಹಾರಗಳ ದಾಖಲೆಗಳು, ಹೂಡಿಕೆದಾರರ ವಿವರಗಳು, ಬ್ಯಾಂಕ್ ದಾಖಲೆಗಳು ಹಾಗೂ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತನಿಖೆಯಲ್ಲಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರ (DRCS) ಕಚೇರಿ ಅಧಿಕಾರಿಗಳು, ನಗರ ಪೊಲೀಸ್ ಇಲಾಖೆ ಹಾಗೂ ಆದಾಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. ಅಧಿಕಾರಿಗಳು ಕಂಪನಿಯ ಠೇವಣಿ ಸಂಗ್ರಹ ಮಾದರಿ, ಹೂಡಿಕೆ ಯೋಜನೆಗಳು, ಬ್ಯಾಂಕ್ ಖಾತೆಗಳ ಚಲನವಲನ ಹಾಗೂ ಡಿಜಿಟಲ್ ವ್ಯವಹಾರಗಳನ್ನು ಪರಿಶೀಲಿಸಿದ್ದಾರೆ.
ಏನೀದು ನೆಟ್ ವರ್ಕ್ ಮಾರ್ಕೆಟಿಂಗ್
Fonzie ಮಲ್ಟಿ ಲೆವೆಲ್ ನೆಟ್ವರ್ಕ್ ಮಾರ್ಕೆಟಿಂಗ್ ಮತ್ತು ಫೋಂಜಿ ಸ್ಕೀಮ್ಗಳ ಬಲೆಗೆ ಜನರು
ಇತ್ತೀಚಿನ ವರ್ಷಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ “ವೇಗವಾಗಿ ಹಣ ದುಪ್ಪಟ್ಟು”, “ಮನೆಯಲ್ಲಿ ಕೂತು ಆದಾಯ”, “ಕೆಲವೇ ತಿಂಗಳಲ್ಲಿ ಆರ್ಥಿಕ ಸ್ವಾತಂತ್ರ್ಯ” ಎಂಬ ಆಮಿಷದ ಜಾಹೀರಾತುಗಳ ಮೂಲಕ ಅನೇಕ ಮಲ್ಟಿ ಲೆವೆಲ್ ನೆಟ್ವರ್ಕ್ ಮಾರ್ಕೆಟಿಂಗ್ (MLM) ಮತ್ತು ಫೋಂಜಿ ಸ್ಕೀಮ್ಗಳು ಜನರನ್ನು ಸೆಳೆಯುತ್ತಿವೆ. ಆರಂಭದಲ್ಲಿ ಲಾಭದ ಭರವಸೆ ನೀಡುವ ಇಂತಹ ಸಂಸ್ಥೆಗಳು, ನಂತರ ಸಾವಿರಾರು ಹೂಡಿಕೆದಾರರನ್ನು ಸಂಕಷ್ಟಕ್ಕೆ ತಳ್ಳುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ.
ಆರ್ಥಿಕ ತಜ್ಞರ ಪ್ರಕಾರ, ಕಾನೂನುಬದ್ಧ ಡೈರೆಕ್ಟ್ ಸೇಲಿಂಗ್ ವ್ಯವಹಾರ ಮತ್ತು ಅಕ್ರಮ ಫೋಂಜಿ ಸ್ಕೀಮ್ ನಡುವೆ ದೊಡ್ಡ ವ್ಯತ್ಯಾಸವಿದೆ. ಆದರೆ ಸಾಮಾನ್ಯ ಜನರಿಗೆ ಈ ವ್ಯತ್ಯಾಸ ಸ್ಪಷ್ಟವಾಗದ ಕಾರಣ ಮೋಸಕ್ಕೆ ಒಳಗಾಗುವ ಸಂಭವ ಹೆಚ್ಚಾಗಿದೆ.
Fonzie ಫೋಂಜಿ ಸ್ಕೀಮ್ ಎಂದರೇನು?
ಫೋಂಜಿ ಸ್ಕೀಮ್ ಎನ್ನುವುದು ಹೊಸ ಸದಸ್ಯರಿಂದ ಬಂದ ಹಣವನ್ನು ಹಳೆಯ ಸದಸ್ಯರಿಗೆ ಲಾಭದ ರೂಪದಲ್ಲಿ ನೀಡುವ ವ್ಯವಸ್ಥೆ. ಯಾವುದೇ ನಿಜವಾದ ವ್ಯಾಪಾರ ಅಥವಾ ಉತ್ಪಾದನೆ ಇಲ್ಲದೇ, ಕೇವಲ ಹೊಸ ಹೂಡಿಕೆದಾರರ ಹಣದ ಆಧಾರದ ಮೇಲೆ ಯೋಜನೆ ಸಾಗುತ್ತದೆ. ಹೊಸ ಸದಸ್ಯರ ಸೇರ್ಪಡೆ ಕಡಿಮೆಯಾದಾಗ ಸಂಪೂರ್ಣ ವ್ಯವಸ್ಥೆ ಕುಸಿದು ಬೀಳುತ್ತದೆ.
ಅಧಿಕಾರಿಗಳ ಪ್ರಕಾರ, ಇಂತಹ ಯೋಜನೆಗಳು ಆರಂಭದಲ್ಲಿ ಕೆಲವರಿಗೆ ಲಾಭ ನೀಡುವ ಮೂಲಕ ವಿಶ್ವಾಸ ಗಳಿಸುತ್ತವೆ. ನಂತರ ಹೆಚ್ಚು ಜನರನ್ನು ಸೇರಿಸಿ ದೊಡ್ಡ ಪ್ರಮಾಣದ ಹಣ ಸಂಗ್ರಹಿಸಿ ಸಂಸ್ಥೆಯ ನಿರ್ವಾಹಕರು ಪರಾರಿಯಾಗುವ ಪ್ರಕರಣಗಳು ದೇಶದ ಹಲವೆಡೆ ದಾಖಲಾಗಿವೆ.
ಸಾಮಾಜಿಕ ಜಾಲತಾಣಗಳ ಮೂಲಕ ಬಲೆಗೆ
ಹಿಂದೆ ಮನೆಮನೆಗೆ ತೆರಳಿ ಸದಸ್ಯರನ್ನು ಸೇರಿಸುವ ಪದ್ಧತಿ ಇದ್ದರೆ, ಈಗ ವಾಟ್ಸಾಪ್, ಟೆಲಿಗ್ರಾಂ, ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಂ ಮೂಲಕ ಯುವಕರನ್ನು ಗುರಿಯಾಗಿಸಲಾಗುತ್ತಿದೆ. “ಪ್ರತಿ ದಿನ ಖಚಿತ ಆದಾಯ”, “ಕೆಲಸವಿಲ್ಲದೆ ಹಣ”, “ಕ್ರಿಪ್ಟೋ ಹೂಡಿಕೆ”, “ಡಿಜಿಟಲ್ ಟ್ರೇಡಿಂಗ್” ಎಂಬ ಹೆಸರಿನಲ್ಲಿ ಆಕರ್ಷಕ ವಿಡಿಯೋಗಳು ಹರಿದಾಡುತ್ತಿವೆ.
ಕೆಲವು ಸಂಸ್ಥೆಗಳು ತಮ್ಮ ಯೋಜನೆಗೆ “ನೆಟ್ವರ್ಕ್ ಬಿಸಿನೆಸ್”, “ರೆಫರಲ್ ಇನ್ಕಮ್”, “ಡಿಜಿಟಲ್ ಎಸೆಟ್ ಪ್ಲಾಟ್ಫಾರ್ಮ್” ಎಂಬ ಹೊಸ ಹೆಸರುಗಳನ್ನು ಬಳಸುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಗ್ರಾಮೀಣ ಪ್ರದೇಶಗಳಿಗೂ ವಿಸ್ತರಣೆ
ನಗರಗಳಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿಯೂ ಇಂತಹ ಯೋಜನೆಗಳು ವ್ಯಾಪಕವಾಗಿ ಹರಡುತ್ತಿವೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯದ ಆಸೆಯಿಂದ ಯುವಕರು, ಗೃಹಿಣಿಯರು ಮತ್ತು ನಿವೃತ್ತರು ತಮ್ಮ ಉಳಿತಾಯ ಹಣ ಹೂಡುತ್ತಿದ್ದಾರೆ.
ಕೆಲವೆಡೆ ಬ್ಯಾಂಕ್ ಸಾಲ ಪಡೆದು ಹೂಡಿಕೆ ಮಾಡಿದವರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಣ ಮರಳದ ಕಾರಣ ಕುಟುಂಬಗಳಲ್ಲಿ ಆರ್ಥಿಕ ಸಮಸ್ಯೆಗಳು ಮತ್ತು ಮಾನಸಿಕ ಒತ್ತಡ ಹೆಚ್ಚುತ್ತಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ.
Fonzie Schme ಪೊಲೀಸರ ಎಚ್ಚರಿಕೆ
ಪೊಲೀಸ್ ಮತ್ತು ಆರ್ಥಿಕ ಅಪರಾಧ ವಿಭಾಗಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿವೆ. “ತಿಂಗಳಿಗೆ 20 ರಿಂದ 30 ಶೇಕಡಾ ಖಚಿತ ಲಾಭ”, “ಕೆಲವೇ ದಿನಗಳಲ್ಲಿ ಹಣ ಮೂರು ಪಟ್ಟು” ಎಂಬ ಭರವಸೆ ನೀಡುವ ಸಂಸ್ಥೆಗಳ ಬಗ್ಗೆ ಅನುಮಾನ ಹೊಂದಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೂಡಿಕೆ ಮಾಡುವ ಮೊದಲು ಸಂಸ್ಥೆಯ ನೋಂದಣಿ, ನಿಜವಾದ ವ್ಯವಹಾರ ಚಟುವಟಿಕೆ, ಆದಾಯ ಮೂಲ ಮತ್ತು ಸರ್ಕಾರದ ಅನುಮತಿ ಕುರಿತು ಪರಿಶೀಲನೆ ನಡೆಸಬೇಕು ಎಂದು ಸಲಹೆ ನೀಡಲಾಗಿದೆ.
ಕಾನೂನುಬದ್ಧ MLM ಮತ್ತು ಅಕ್ರಮ ಯೋಜನೆಗಳ ವ್ಯತ್ಯಾಸ
ತಜ್ಞರ ಪ್ರಕಾರ, ಕಾನೂನುಬದ್ಧ ಡೈರೆಕ್ಟ್ ಸೇಲಿಂಗ್ ಕಂಪನಿಗಳು ಉತ್ಪನ್ನಗಳ ಮಾರಾಟದ ಆಧಾರದ ಮೇಲೆ ಆದಾಯ ನೀಡುತ್ತವೆ. ಆದರೆ ಅಕ್ರಮ ಫೋಂಜಿ ಮಾದರಿಯಲ್ಲಿ ಹೊಸ ಸದಸ್ಯರನ್ನು ಸೇರಿಸುವುದೇ ಮುಖ್ಯ ಆದಾಯ ಮೂಲವಾಗಿರುತ್ತದೆ.
ಯಾವುದೇ ಉತ್ಪನ್ನ ಅಥವಾ ಸೇವೆ ಸ್ಪಷ್ಟವಾಗಿಲ್ಲದಿದ್ದರೆ, ಅಥವಾ ಸದಸ್ಯರ ಸೇರ್ಪಡೆಗೆ ಮಾತ್ರ ಹೆಚ್ಚಿನ ಒತ್ತು ನೀಡುತ್ತಿದ್ದರೆ ಜನರು ಎಚ್ಚರಿಕೆಯಿಂದಿರಬೇಕು ಎಂದು ಆರ್ಥಿಕ ತಜ್ಞರು ಸೂಚಿಸಿದ್ದಾರೆ.
ಜನರಿಗೆ ಮನವಿ
ಹೂಡಿಕೆ ಮಾಡುವ ಮೊದಲು ತಜ್ಞರ ಸಲಹೆ ಪಡೆಯುವುದು, ಕಂಪನಿಯ ದಾಖಲೆಗಳನ್ನು ಪರಿಶೀಲಿಸುವುದು ಮತ್ತು ಅತಿಯಾದ ಲಾಭದ ಭರವಸೆಗಳನ್ನು ನಂಬದಿರುವುದು ಅತ್ಯಂತ ಅಗತ್ಯವಾಗಿದೆ. “ತ್ವರಿತ ಶ್ರೀಮಂತಿಕೆ” ಎಂಬ ಆಮಿಷವೇ ಅನೇಕ ಮೋಸಗಳ ಮೂಲ ಕಾರಣ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಸರ್ಕಾರ ಮತ್ತು ತನಿಖಾ ಸಂಸ್ಥೆಗಳು ಕ್ರಮ ಕೈಗೊಳ್ಳುತ್ತಿದ್ದರೂ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿದಾಗ ಮಾತ್ರ ಇಂತಹ ಫೋಂಜಿ ಮತ್ತು ಅಕ್ರಮ ನೆಟ್ವರ್ಕ್ ಮಾರ್ಕೆಟಿಂಗ್ ಯೋಜನೆಗಳಿಗೆ ಕಡಿವಾಣ ಬೀಳಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

