Jamun Fruit ನೇರಳೆ ಫಸಲು ಹೆಚ್ಚಳ: ಬರಗಾಲ ನಿಶ್ಚಿತವೇ? 64% Rainfall Deficit !

Jamun Fruit

Jamun Fruit ನೇರಳೆ ಹಣ್ಣು ಈ ಬಾರಿ ವಿಪರೀತ ಎನ್ನಿಸುವಷ್ಟು ಫಸಲು ಬಿಟ್ಟಿದೆ. ಕಳೆದ 30-40 ವರ್ಷಗಳಿಗಿಂತಲೂ ಈ ಬಾರಿ ಅಧಿಕ ಫಸಲು ಎಂದೇ ಹೇಳಲಾಗುತ್ತಿದೆ. ಮಧುಮೇಹ ಸೇರಿದಂತೆ ಹಲವಾರು ಅನಾರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿರುವ ನೇರಳೆ ಹಣ್ಣು(Jamun Fruit), ಹಿಂದೆಂದಿಗಿಂತಲೂ ಹಲವು ಕಡೆಗಳಲ್ಲಿ ಈ ಬಾರಿ ಕಡಿಮೆ ದರದಲ್ಲಿ ಮಾರಾಟ ಆಗುತ್ತಿವೆ..

ಕೆಲವು ಕಡೆಗಳಲ್ಲಿ ವ್ಯಾಪಾರಸ್ಥರು ದುಬಾರಿಯಾಗಿಯೇ ಮಾರುತ್ತಿದ್ದರೂ, ಈ ಬಾರಿ ಮಾತ್ರ ಹಿಂದೆಂದಿಗಿಂತಲೂ ಫಸಲಂತೂ ಭರ್ಜರಿಯಾಗಿ ಬಂದಿದೆ. ಆದರೆ ನೂರಾರು ವರ್ಷಗಳಿಂದ ಇರುವ ಗಾದೆ ಮಾತೊಂದು ಈ ವರ್ಷ ಹಿರಿಯರ ಬಾಯಲ್ಲಿ ಕೇಳಿಬರುತ್ತಿದೆ, ಅದೇನೆಂದರೆ, ಯಾವ ಬೇಸಿಗೆಯಲ್ಲಿ ನೇರಳೆ ಹಣ್ಣು ಹೀಗೆ ರಾಶಿ ರಾಶಿಯಾಗಿ ಬೀಳುತ್ತದೆಯೋ, ಆ ವರ್ಷ ಬರಗಾಲ ಇರುತ್ತದೆ ಎನ್ನುವುದು. ನೇರಳೆ ಹಣ್ಣು ಹೇರಳವಾಗಿ ಬಂದ ವರ್ಷ ಬರಗಾಲ ಕಟ್ಟಿಟ್ಟದ್ದು ಎನ್ನುವುದು ಹಿರಿಯರ ಅಭಿಮತ.

Jamun Fruit

Jamun Fruit ಪ್ರಕೃತಿಯ ಸಂದೇಶ

ಪ್ರಕೃತಿ ನಮಗೆ ಆಗಾಗ ಕೆಲವು ಸಿಗ್ನಲ್‌ಗಳನ್ನು (Nature ) ನೀಡುತ್ತಿರುತ್ತದೆ. ಸದ್ಯ ದೇಶದ ಹಲವು ಭಾಗಗಳಲ್ಲಿ ಒಂದು ವಿಚಿತ್ರ ಪ್ರಕೃತಿ ವಿದ್ಯಾಮಾನ ಬೆಳಕಿಗೆ ಬಂದಿದೆ. ಹಳ್ಳಿಗಳಲ್ಲಿ ಒಂದು ಹಳೆಯ ನಂಬಿಕೆ ಇದೆ, ಯಾವ ವರ್ಷ ಮರಗಳಿಂದ ಅತೀ ಹೆಚ್ಚು ನೇರಳೆ ಹಣ್ಣು (Jamun Fruit) ಹಾಗೂ ಹಲಸು (Jackfruit) ಕೆಳಗೆ ಬಿದ್ದು ಕೊಳೆಯುತ್ತವೋ, ಆ ವರ್ಷ ಭೀಕರ ಬರಗಾಲ ಬರುತ್ತದೆ ಎಂಬುದು ಹಳ್ಳಿಯ ಜನ ನಂಬಿಕೆಯಾಗಿದೆ. ಸದ್ಯ ಈ ದೃಶ್ಯಗಳು ಹಲವು ಕಡೆ ಕಂಡು ಬರುತ್ತಿದ್ದು, ಹಾಗಾದರೆ ಇದು ನಿಜವೇ? ಭವಿಷ್ಯದ ಬಗ್ಗೆ ಪ್ರಕೃತಿ ನೀಡುತ್ತಿರುವ ಮುನ್ಸೂಚನೆಯೇ? ಇದರ ಹಿಂದಿರುವ ಅಸಲಿ ಸತ್ಯವೇನು ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ (Social Media) ಜೋರಾಗಿದೆ.

ಈ ಬೇಸಿಗೆ ಕಾಲದಲ್ಲಿ ರಸ್ತೆ ಬದಿಯಲ್ಲಿ, ಹೊಲ ಗದ್ದೆಗಳಲ್ಲಿ ಹಿಂದೆಂದೂ ಕಾಣದಷ್ಟು ನೇರಳೆ ಹಣ್ಣಿನ ಫಸಲು ಕಂಡು ಬಂದಿದ್ದು, ಇದರಿಂದ ಹಲವು ಪ್ರದೇಶಗಳಲ್ಲಿ ನೇರಳೆ ಹಣ್ಣಾಗಿ ನೆಲಕ್ಕೆ ಬಿದ್ದು ಕೊಳೆಯುತ್ತಿವೆ. ಕಳೆದ ವರ್ಷ ಕಡಿಮೆ ಹಣ್ಣು ಬಿಟ್ಟಿದ್ದ ಮರದ ಕೊಂಬೆಗಳು ಕೂಡ ಈ ವರ್ಷ ಅತೀ ಹೆಚ್ಚು ಹಣ್ಣು ಬಿಟ್ಟು ಹಣ್ಣಿನ ಭಾರಕ್ಕೆ ಕೆಳಗೆ ಬಾಗಿವೆ. ಆದರೆ, ಈ ಹಣ್ಣುಗಳು ಕೆಳಗೆ ಬಿದ್ದು ಕೊಳೆಯುತ್ತಿರುವುದನ್ನು ನೋಡಿ ಸ್ಥಳೀಯ ರೈತರು ಮತ್ತು ಹಳ್ಳಿಯ ಹಿರಿಯರು ಆತಂಕ ಪಡುತ್ತಿದ್ದಾರೆ. ʻನೇರಳೆ ಹಣ್ಣುಗಳು ಕೊಳೆದರೆ ಬರಗಾಲ ಗ್ಯಾರಂಟಿʼ ಎಂಬ ಮೂಢನಂಬಿಕೆಯೇ ಇದಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಬರೆದುಕೊಂಡಿದ್ದು, ಮುಂಗಾರು ಮಳ ಕೂಡ ದುರ್ಬಲವಾಗಿದೆ. ಜೂನ್ ಅರ್ಥ ತಿಂಗಳು ಕಳೆದರು ರಾಜ್ಯ ದಲ್ಲಿ ನಿರೀಕ್ಷಿತ ಮಳೆ (Rain) ಆಗಿಲ್ಲ.

ಈ ಬಾರಿ ಹಲಸು (Jackfruit) ಫಸಲು ಕೂಡ ಹೆಚ್ಚಾಗಿದ್ದು ಜೂನ್ ತಿಂಗಳಲ್ಲಿ ಕೂಡ ಹಲಸು ಹಬ್ಬ ನಡೆಯುತ್ತಿದೆ.ಗ್ರಾಮೀಣ ಪ್ರದೇಷದಲ್ಲಿ ಹಲಸು ಮರದಲ್ಲೆ ಹ ಣ್ಣಾಗಿ ಕೊಳತು ನೆಲಕ್ಕೆ ಬಿದ್ದಿರುವ ದೃಶ್ಯ ಸಾಮಾನ್ಯವಾಗಿದೆ.

ನೇರಳೆ ಹಣ್ಣಿನ (Jamun Fruit) ಫಸಲು ಹೆಚ್ಚಾಗಿರುವುದು ಬರಗಾಲದ ಮುನ್ಸೂಚನೆ ಎಂಬ ಹಿರಿಯರ ಮಾತಿಗೆ ವೈಜ್ಞಾನಿಕ ಆಧಾರವಿದೆ. ‘ಸ್ಟ್ರೆಸ್ ಫ್ರೂಟಿಂಗ್’ ಎಂಬ ಈ ವಿದ್ಯಮಾನದಲ್ಲಿ, ನೀರಿನ ಅಭಾವವನ್ನು ಗ್ರಹಿಸುವ ಮರವು ತನ್ನ ಸಂತತಿಯನ್ನು ಉಳಿಸಲು ತನ್ನೆಲ್ಲಾ ಶಕ್ತಿಯನ್ನು ಹಣ್ಣುಗಳನ್ನು ಉತ್ಪಾದಿಸಲು ಬಳಸುತ್ತದೆ. ಇದು ಪ್ರಕೃತಿಯು ನೀಡುವ ಭವಿಷ್ಯದ ಶುಷ್ಕ ಕಾಲದ ಎಚ್ಚರಿಕೆಯಾಗಿದೆ.

ಮಾರುಕಟ್ಟೆಗೆ ನೇರಳೆ ಹಣ್ಣು ಲಗ್ಗೆ

ಈ ಮಧ್ಯೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ಪ್ರದೇಶದಲ್ಲಿ ಪೂರ್ವ ಮುಂಗಾರು ಮುಗಿದು, ಮುಂಗಾರು ಮಳೆ ಶುರುವಾಗಿರುವ ಇಂದಿನ ದಿನಗಳಲ್ಲಿ ಮಾರುಕಟ್ಟೆಗೆ ನೇರಳೆ ಹಣ್ಣು ಲಗ್ಗೆ ಇಟ್ಟಿದೆ. ಕಳೆದ ವರ್ಷದಿಂದ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಆವಕವಾಗುತ್ತಿದ್ದು, ದರದಲ್ಲೂ ಇಳಿಕೆ ಕಂಡುಬಂದಿದೆ. ಮಾರುಕಟ್ಟೆಯಲ್ಲಿಯೂ ಹಣ್ಣಿಗೆ ಬೇಡಿಕೆ ಬಂದಿದೆ.

ಎಲ್ಲ ನಗರಗಳ ಪ್ರಮುಖ.ರಸ್ತೆ, ದೊಡ್ಡಪೇಟೆ, ಬಸ್‌ ನಿಲ್ದಾಣ ರಸ್ತೆ, ಮತ್ತು ಎಪಿಎಂಸಿ ರಸ್ತೆಯಲ್ಲಿ ನೇರಳೆ ಹಣ್ಣು ಮಾರಾಟ ನಡೆಯುತ್ತಿದೆ.

ಇದನ್ನು ಓದಿ- Avengers: Doomsday ಮಾರ್ವೆಲ್ ಅಭಿಮಾನಿಗಳಲ್ಲಿ ಹೊಸ ಸಂಚಲನ

ರಸ್ತೆಬದಿಯಲ್ಲಿ ಜಂಬು ನೇರಳೆ ಹಣ್ಣುಗಳ ರಾಶಿ ದಾರಿ ಹೋಕರ ಗಮನ ಸೆಳೆಯುತ್ತಿದೆ. ನೇರಳೆ ಹಣ್ಣಿಗೆ ಹೆಚ್ಚಿನ ಬೇಡಿಕೆಯಿದೆ. ಹಣ್ಣುಗಳ ಅಧಿಕ ಪೂರೈಕೆಯಿಂದ ನಗರದ ವಿವಿಧ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗಿದೆ.

ಮಾವು, ಹಲಸು ಜೊತೆಯಲ್ಲಿಯೇ ನೇರಳೆ ಹಣ್ಣು ಸಹ ಮಾರುಕಟ್ಟೆಯನ್ನು ಆವರಿಸಿಕೊಂಡಿದೆ. ಕೇವಲ ಎರಡು ತಿಂಗಳು ಮಾತ್ರ ಸಿಗುವ ಈ ಹಣ್ಣುಗಳನ್ನು ಖರೀದಿಸಲು ಗ್ರಾಹಕರು ಉತ್ಸಾಹ ತೋರುತ್ತಿದ್ದಾರೆ. ಜೂನ್‌ ಅಥವಾ ಜುಲೈ ತಿಂಗಳಲ್ಲಿ ಮಾತ್ರ ನೇರಳೆ ಹಣ್ಣು ಫಸಲು ಲಭ್ಯವಾಗುತ್ತದೆ.

Jamun Fruit

ನೇರಳೆ ಹಣ್ಣಿನಲ್ಲಿ ನಾಟಿ ನೇರಳೆ ಮತ್ತು ಜಂಬು ನೇರಳೆ ಎಂಬ ಎರಡು ತಳಿಗಳಿವೆ. ರಸ್ತೆ ಬದಿಯ ಮರಗಳಲ್ಲಿ ಹೆಚ್ಚಾಗಿ ಸಿಗುವುದು ನಾಟಿ ನೇರಳೆ. ಇದು ಗಾತ್ರದಲ್ಲಿ ಚಿಕ್ಕದಾಗಿರುತ್ತದೆ. ರುಚಿಯು ಕಡಿಮೆ. ಇದಕ್ಕೆ ಬೇಡಿಕೆಯೂ ಕಡಿಮೆ. ಜಂಬು ನೇರಳೆ ಹಣ್ಣು ಗಾತ್ರದಲ್ಲಿ ದೊಡ್ಡದು. ನೋಡಲು ಹೆಚ್ಚು ಆಕರ್ಷಣೀಯವಾಗಿರುತ್ತದೆ. ತಿನ್ನಲು ಬಹಳ ಸ್ವಾದಿಷ್ಟವಾಗಿರುತ್ತದೆ. ಈ ನೇರಳೆ ಹಣ್ಣಿನ ದರ ಹೆಚ್ಚು ಮತ್ತು ಬೇಡಿಕೆಯೂ ಹೆಚ್ಚು.

Jamun Fruit  ದರವು ಕೆ.ಜಿ.ಗೆ  400

‘ಮೊದಲ ವಾರ ನೇರಳೆ ಹಣ್ಣಿನ ದರವು ಕೆ.ಜಿ.ಗೆ ₹ 300ರಿಂದ 400ವರೆಗೆ ಮಾರಾಟವಾಗುತ್ತಿತ್ತು. ಜೂನ್‌ 2ನೇ ವಾರದಲ್ಲಿ ನೇರಳೆ ಹಣ್ಣಿನ ಆವಕ ಹೆಚ್ಚಾಗಿದ್ದರಿಂದ ಬೆಲೆ ಕಡಿಮೆಯಾಗಿದೆ. ಒಂದು ಕೆ.ಜಿ.ಗೆ ₹180ರಿಂದ ₹200 ದರವಿದೆ. ಗುಣಮಟ್ಟಕ್ಕೆ ತಕ್ಕಂತೆ ದರ ನಿಗದಿಯಾಗಿರುತ್ತದೆ‘ ಎಂದು ಹಣ್ಣಿನ ವ್ಯಾಪಾರಿ ಶಿವರಾಜ ಅವಂತಿಮಠ ತಿಳಿಸಿದರು.

‘ವಿದೇಶದಲ್ಲಿ ನೇರಳೆ ಕೃಷಿ ಲಾಭದಾಯಕವಾಗಿದೆ. ನಮ್ಮ ರಾಜ್ಯದಲ್ಲಿ ವಾಣಿಜ್ಯ ಬೆಳೆಯಾಗಿ ಪರಿವರ್ತನೆಯಾಗಿಲ್ಲ. ತುಂಗಭದ್ರಾ ನದೀ ತೀರದ ಪ್ರದೇಶ, ತೋಟ, ಗದ್ದೆ, ಮನೆಯ ಹಿತ್ತಲು, ಕಣದಲ್ಲಿ ಬೆರಳಿಕೆಯಲ್ಲಿ ಮರಗಳು ಕಾಣುತ್ತವೆ. ಮಲೆನಾಡು ಪ್ರದೇಶ,ಬಾಗೆಪಲ್ಲಿ, ಬೆಳಗಾವಿ, ಧಾರವಾಡ, ಮೈಸೂರು ಮತ್ತು ಬಳ್ಳಾರಿ ಜಿಲ್ಲೆಯಿಂದ ಹೆಚ್ಚು ನೇರಳೆ ಹಣ್ಣು ಪೂರೈಕೆಯಾಗುತ್ತದೆ. ಸಾಗಣೆ ವೆಚ್ಚ ಮತ್ತು ಕೊಯ್ಲು ಮಾಡುವುದು ಕಷ್ಟ. ನಾಜೂಕಾದ ಕೆಲಸವಾಗಿದ್ದರಿಂದ ರೈತರು ಮನಸ್ಸು ಮಾಡುವುದಿಲ್ಲ’ ಎನ್ನುತ್ತಾರೆ ವ್ಯಾಪಾರಸ್ಥ ಸುರೇಶ..

ಈ ಮೊದಲು ನೇರಳೆ ಹಣ್ಣಿನ ಮಾರಾಟದ ಪದ್ದತಿ ಇರಲ್ಲಿಲ್ಲ. ಅಲ್ಲಲ್ಲಿ ಬೆಳೆಯುತ್ತಿದ್ದ ಮರಗಳಿಂದಲೇ ಜನರು ಹಣ್ಣು ಕಿತ್ತುಕೊಂಡು ತಿನ್ನುತ್ತಿದ್ದರು. ಈಚೆಗೆ ತೋಟಗಾರಿಕೆ ಬೆಳೆಗಾರರು ಉಪಕೃಷಿಯಾಗಿ ನೇರಳೆ ಹಣ್ಣು ಸೇರಿದಂತೆ ಇತರೆ ಹಣ್ಣು ಬೆಳೆದು ಮಾರಾಟ ಮಾಡುತ್ತಿದ್ದಾರೆ. ಕೆಲ ರೈತರು ವ್ಯಾಪಾರಸ್ಥರಿಗೆ ವರ್ಷಕ್ಕೆ ಒಂದು ಬೆಳೆ ಗುತ್ತಿಗೆಗೆ ಕೊಡುತ್ತಾರೆ. ಸಣ್ಣ ವ್ಯಾಪಾರಿಗಳು ದಿನಾಲು ತೋಟಗಳ ಬಳಿಗೆ ಹೋಗಿ ಹಣ್ಣು ಖರೀದಿ ಮಾಡಿ ತಂದು ಮಾರಾಟ ಮಾಡುತ್ತಿದ್ದಾರೆ ಎಂದರು.

ಸಂಸ್ಕೃತದಲ್ಲಿ ಜಂಬು, ಕನ್ನಡದಲ್ಲಿ ನೇರಳೆ ಮತ್ತು ಹಿಂದಿಯಲ್ಲಿ ಜಾಮೂನ್, ಗ್ರಾಮೀಣ ಪ್ರದೇಶದಲ್ಲಿ ನೀರಲ ಹಣ್ಣು ಎಂದು ಕರೆಯುತ್ತಾರೆ. ನೇರಳೆ ಹಣ್ಣು ತಿನ್ನಲಿಕ್ಕೆ ಅಷ್ಟೇ ಬಳಕೆ ಮಾಡುತ್ತಿದ್ದರು. ಈಚೆಗೆ ನೇರಳೆ ಹಣ್ಣಿನ ಜ್ಯೂಸ್‌, ಐಸ್‌ಕ್ರೀಂ, ಜಾಮ್‌, ವೈನ್‌ ಸಹಿತ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ನೇರಳೆ ಹಣ್ಣಿನಲ್ಲಿ ವಿಟಮಿನ್‌ ಸಿ ಮತ್ತು ಆಂಟಿಆಕ್ಸಿಡೆಂಟ್‌ ಸಮೃದ್ಧವಾಗಿದೆ. ಇದರ ಬೀಜ, ಎಲೆ ಮತ್ತು ತೊಗಟೆ ಎಲ್ಲವೂ ಮಧುಮೇಹ ನಿಯಂತ್ರಣ, ರಕ್ತ ಶುದ್ಧೀಕರಣ ಹಾಗೂ ಅಜೀರ್ಣ, ಹೊಟ್ಟೆ ನೋವು, ಭೇದಿ ಮತ್ತು ಅತಿಸಾರದಂತಹ ಸಮಸ್ಯೆಗಳಿಗೆ ಪರಿಹಾರವಾಗಿದೆ ಎಂದು ವೈದ್ಯರು ಹೇಳುತ್ತಾರೆ.

ನೇರಳೆ ಹಣ್ಣು (Jamun Fruit) – ಆರೋಗ್ಯಕ್ಕೆ ಪ್ರಕೃತಿಯ ಅಮೂಲ್ಯ ಕೊಡುಗೆ

ನೇರಳೆ ಹಣ್ಣು, ವೈಜ್ಞಾನಿಕವಾಗಿ Syzygium cumini ಎಂದು ಕರೆಯಲ್ಪಡುವ ಈ ಹಣ್ಣು, ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಕಪ್ಪು ನೇರಳೆ ಬಣ್ಣದ ಈ ಹಣ್ಣು ವಿಶೇಷವಾಗಿ ಬೇಸಿಗೆ ಕಾಲದಲ್ಲಿ ದೊರೆಯುತ್ತದೆ ಮತ್ತು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ.

ನೇರಳೆ ಹಣ್ಣಿನಲ್ಲಿ ವಿಟಮಿನ್ C, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಂ ಹಾಗೂ ಆ್ಯಂಟಿ ಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕವಾಗಿದ್ದು, ಮಧುಮೇಹ ರೋಗಿಗಳಿಗೆ ಉಪಯುಕ್ತವೆಂದು ಪರಿಗಣಿಸಲಾಗಿದೆ. ಜೀರ್ಣಕ್ರಿಯೆಯನ್ನು ಸುಧಾರಿಸಿ, ಮಲಬದ್ಧತೆ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Jamun Fruit

ಇದಲ್ಲದೆ, ನೇರಳೆ ಹಣ್ಣು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸೋಂಕುಗಳ ವಿರುದ್ಧ ರಕ್ಷಣೆ ನೀಡುತ್ತದೆ. ಹೃದಯದ ಆರೋಗ್ಯ ಕಾಪಾಡಲು, ರಕ್ತದೊತ್ತಡ ನಿಯಂತ್ರಿಸಲು ಹಾಗೂ ಯಕೃತ್ತಿನ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಕಾರಿಯಾಗಿದೆ. ಇದರಲ್ಲಿರುವ ಪೋಷಕಾಂಶಗಳು ಮೆದುಳಿನ ಆರೋಗ್ಯಕ್ಕೂ ಒಳ್ಳೆಯದು.

ನೇರಳೆ ಹಣ್ಣಿನ ಬೀಜಗಳು ಸಹ ಔಷಧೀಯ ಮಹತ್ವ ಹೊಂದಿದ್ದು, ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳಲ್ಲಿ ಬಳಸಲಾಗುತ್ತದೆ. ಹಲ್ಲು ಮತ್ತು ಒಸಡುಗಳ ಆರೋಗ್ಯವನ್ನು ಕಾಪಾಡಲು ಸಹ ಇದು ನೆರವಾಗುತ್ತದೆ.

ಆದಾಗ್ಯೂ, ಯಾವುದೇ ಆಹಾರವನ್ನು ಮಿತವಾಗಿ ಸೇವಿಸುವುದು ಮುಖ್ಯ. ಆರೋಗ್ಯಕರ ಜೀವನಶೈಲಿಯ ಭಾಗವಾಗಿ ನೇರಳೆ ಹಣ್ಣನ್ನು ಆಹಾರದಲ್ಲಿ ಸೇರಿಸುವುದರಿಂದ ಹಲವು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. “ನೇರಳೆ ಹಣ್ಣು – ರುಚಿಯ ಜೊತೆಗೆ ಆರೋಗ್ಯದ ಖಜಾನೆ!”

Leave a Reply

Your email address will not be published. Required fields are marked *